Tumgik
#ಆಚರಣ
Text
ದುಬೈನಲ್ಲಿ ನೈಸಾ ದೇವಗನ್ ಅವರ ಹೊಸ 12 ತಿಂಗಳ ಆಚರಣೆ
ದುಬೈನಲ್ಲಿ ನೈಸಾ ದೇವಗನ್ ಅವರ ಹೊಸ 12 ತಿಂಗಳ ಆಚರಣೆ
ನೈಸಾ ದೇವಗನ್ ವಿಡಿಯೋ: ನೈಸಾ ದೇವಗನ್ ಬಾಲಿವುಡ್ ಉದ್ಯಮದ ಪ್ರಸಿದ್ಧ ಸ್ಟಾರ್ ಯುವಕರಲ್ಲಿ ಒಬ್ಬರು. ಕಾಜೋಲ್ ಮತ್ತು ಅಜಯ್ ದೇವಗನ್ ಅವರ ಪ್ರಿಯತಮೆ ಡಿಸ್ಪ್ಲೇ ಪರದೆಯಿಂದ ದೂರವಿದ್ದರೂ ಸಹ ಜನಮನದಲ್ಲಿ ಉಳಿಯುತ್ತದೆ. ನ್ಯಾಸಾ ತನ್ನ ಜೀವನವನ್ನು ಪೂರ್ಣವಾಗಿ ಆನಂದಿಸುತ್ತಾಳೆ, ಇದಕ್ಕೆ ಪುರಾವೆಯು ಅವಳ ವೈರಲ್ ದೃಶ್ಯಗಳು ಮತ್ತು ಚಲನಚಿತ್ರಗಳಿಂದ ಸ್ಪಷ್ಟವಾಗಿದೆ. ನ್ಯಾಸಾ ಹೊಸ 12 ತಿಂಗಳ ಸಂಭ್ರಮಾಚರಣೆಗಾಗಿ ದುಬೈನಲ್ಲಿರುವ ಕ್ಷಣದಲ್ಲಿದ್ದಾರೆ. ಅಲ್ಲಿಂದ, ಅವರ ಕೆಲವು ಬೆರಗುಗೊಳಿಸುವ ದೃಶ್ಯಗಳು…
Tumblr media
View On WordPress
0 notes
chamundinews · 5 years
Text
ಕನ್ನಡ ಉಳಿಸಿ ಬೆಳೆಸುವ ಇಚ್ಚಾಸಕ್ತಿ ಎಲ್ಲರಿಗೂ ಬರಬೇಕಿದೆ - ತಹಶೀಲ್ದಾರ್ ನಟೇಶ್
Tumblr media Tumblr media
ಶಾಸ್ತ್ರೀಯ ಸ್ಥಾನಮಾನ ಪಡೆದಿರುವ ಕನ್ನಡ ಭಾಷೆ ಬೆಳೆಯಬೇಕಾದರೆ ಕೇವಲ ಸಾಹಿತಿಗಳು, ಕವಿಗಳು, ಶಿಕ್ಷಕರಷ್ಟೆ ಕನ್ನಡದಲ್ಲಿ ಬರೆದರೆ ಸಾಲದು ವೈದ್ಯರು, ವಕೀಲರು, ವಿಜ್ಞಾನಿಗಳು ಸೇರಿದಂತೆ ಸಮಾಜದ ಎಲ್ಲಾ ವರ್ಗಗಳು ಕನ್ನಡವನ್ನು ಬೆಳೆಸುವ ಇಚ್ಚಾಸಕ್ತಿ ಪ್ರದರ್ಶಿಸಬೇಕೆಂದು ತಹಸೀಲ್ದಾರ್ ಎನ್.ವಿ.ನಟೇಶ್ ಹೇಳಿದರು. ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿಯಿಂದ ಇಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ತಹಸೀಲ್ದಾರ್ ಎನ್.ವಿ.ನಟೇಶ್, ಕನ್ನಡ ರಾಜ್ಯೋತ್ಸವ ಎನ್ನುವುದು ಕೇವಲ ಉತ್ಸವ ಅಲ್ಲ, ಕನ್ನಡ ರಾಜ್ಯೋತ್ಸವ ನವೆಂಬರ್ ತಿಂಗಳಲ್ಲಿ ಮಾತ್ರವೆ ಆಚರಿಸದೆ ದಿನನಿತ್ಯದ ಕನ್ನಡಿಗರ ಹಬ್ಬವಾಗಬೇಕೆಂದರು. ವಿವಿಧ ಪ್ರಾಂತ್ಯಗಳಲ್ಲಿ ಹರಿದು ಹಂಚಿಹೋಗಿದ್ದ ಕನ್ನಡಿಗರು ಕನ್ನಡದ ಕರುಳಬಳ್ಳಿಯ ಮೂಲಕ ಒಗ್ಗೂಡಿದ ಐತಿಹಾಸಿಕ ದಿನವಾಗಿದೆ. ಇದರಲ್ಲಿ ಲಕ್ಷಾಂತರ ಕನ್ನಡಿಗರ ತ್ಯಾಗ ಬಲಿದಾನವಿದೆ. ಕನ್ನಡ ಭಾಷೆಗೆ ೨ ಸಾವಿರ ವರ್ಷಗಳ ಇತಿಹಾಸವಿದ್ದು ಶತಮಾನಗಳ ಹಿಂದೆ ಕನ್ನಡನಾಡನ್ನು ಕನ್ನಡಿಗರೆ ಆಳ್ವಿಕೆ ನಡೆಸಿದ್ದಾರೆ ಎಂದು ತಿಳಿಸಿದರು. ಕನ್ನಡ ಧ್ವಜಾರೋಹಣ ನೆರವೇರಿಸಿ ಹಾಗೂ ರಾಜೇಶ್ವರಿ ದೇವಿಗೆ ಪೂಜೆ ನೆರವೇರಿಸಿ ಮಾತನಾಡಿದ, ಶಾಸಕ ಕೆ.ಎಸ್.ಲಿಂಗೇಶ್, ಕನ್ನಡ ಭಾಷೆಗೆ ಹೋರಾಟ ಮಾಡಿದವರನ್ನು ಇಂದು ನಾವುಗಳು ಸ್ಮರಿಸಿಕೊಳ್ಳಬೇಕಿದೆ, ಇಂದು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಕನ್ನಡ ರಾಜ್ಯೋತ್ಸವದಂದು ಮಳೆ ಇಲ್ಲದೆ ಬಿಡುವು ಕೊಟ್ಟಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ವಿವಿಧ ಶಾಲಾ ಮಕ್ಕಳಿಂದ ಪಥ ಸಂಚಲನ ನಡೆಯಿತು. ತಾ.ಪಂ.ಅಧ್ಯಕ್ಷ ರಂಗೇಗೌಡ, ಜಿ.ಪಂ.ಸದಸ್ಯರಾದ ಲತಾಮಂಜೇಶ್ವರಿ, ತಾ.ಪಂ.ಉಪಾಧ್ಯಕ್ಷೆ ಜಮುನಾಅಣ್ಣಪ್ಪ ಮಾತನಾಡಿದರು, ಇದೆ ವೇಳೆ ಕ್ರೀಡಾಪಟು ವಿಭುಪಟೇಲ್, ಭರತನಾಟ್ಯ ಕಲಾವಿ���ೆ ಅನನ್ಯ, ಸಾಹಿತಿ ಡಾ.ಶಾಲಿನಿ, ಕೃಷಿಕ ಮಲ್ಲೇಶಪ್ಪ, ಕರವೇ ಅಧ್ಯಕ್ಷ ಬೋಜೇಗೌಡ, ಪುರಸಭ ಮಾಜಿ ಅಧ್ಯಕ್ಷ ಟಿ.ಎ.ಶ್ರೀನಿಧಿ, ಫಾರೆಸ್ಟರ್ ಸುಭಾಷ್ ಇವರನ್ನು ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದ ಸರ್ವೋದಯ ಶಾಲೆಯ ಪ್ರತಿಜ್ಞಾಪ್ರಕಾಶ್ ಇವರನ್ನು ಗೌರವಿಸಲಾಯಿತು. ಎಪಿಎಂಸಿ ಅಧ್ಯಕ್ಷ ಕೃಷ್ಣೇಗೌಡ, ತಾ.ಪಂ.ಸದಸ್ಯೆ ಕಮಲಚಿಕ್ಕಣ್ಣ, ವೇಲಾಪುರಿ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಎಚ್.ಎಂ.ದಯಾನಂದ್, ತಾ.ಪಂ.ಇಒ ರವಿಕುಮಾರ್, ಬಿಇಒ ಶಾಕೀರಲಿಖಾನ್, ಕಸಾಪ ಅಧ್ಯಕ್ಷ ರವೀಶ್, ಸಿಒ ಮಂಜುನಾಥ್, ಮ.ಶಿವಮೂರ್ತಿ ಇತರರು ಇದ್ದರು. ಬೇಲೂರಿನಲ್ಲಿ ರಾಜ್ಯೋತ್ಸವದಂದು ಭುವನೇಶ್ವರಿ ದೇವಿ ರಥ, ಮಹಿಳೆಯರ ಡೊಳ್ಳುಕುಣಿತ, ಸಾರಿಗೆ ಬಸ್ ಅಲಂಕಾರ ಕಂಗೊಳಿಸಿತು ಚಾಮುಂಡಿ ನ್ಯೂಸ್ ವರದಿ: ನವೀನ್ ಕುಮಾರ್ ಗೌಡ ಹಾಸನ Read the full article
0 notes
chamundinews · 5 years
Text
ಸಾವಿರಾರು ಹೋರಾಟಗಾರರ ತ್ಯಾಗ ಬಲಿದಾನದಿಂದ ಕರ್ನಾಟಕ ಒಂದುಗೂಡಿದೆ : ಶಾಸಕ ಯತಿಂದ್ರಸಿದ್ದರಾಮಯ್ಯ
Tumblr media Tumblr media
ಕನ್ನಡ ಮಾತನಾಡುವ ವಿವಿಧ ಪ್ರಾಂತಗಳಾಗಿ ಹರಿದು ಹಂಚಿಹೋಗಿದ್ದ ಪ್ರದೇಶಗಳನ್ನೂ ಏಕೀಕರಣಕ್ಕೆ ದೊಡ್ಡ ಹೋರಾಟದ ಇತಿಹಾಸವಿದೆ ಕವಿಗಳು ಸಾಹಿತಿಗಳು ಕಲಾವಿದರು ಕನ್ನಡ ಸಂಘಟನೆಗಳು ರಾಜಕಾರಣಿಗಳ ಹೋರಾಟದ ಫಲವಾಗಿದೆ ಅವರ ವೈಯಕ್ತಿಕ ತ್ಯಾಗಗಳನ್ನು ಲೆಕ್ಕಿಸದೆ ಕರ್ನಾಟಕವನ್ನು ಒಂದುಗೂಡಿಸಿದ್ದಾರೆ ಎಂದು ವರುಣ ಕ್ಷೇತ್ರದ ಶಾಸಕ ಯತಿಂದ್ರಸಿದ್ದರಾಮಯ್ಯ ತಿಳಿಸಿದರು ಅವರು ನಂಜನಗೂಡು ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿಯಿಂದ ಪಟ್ಟಣದ ಜೂನಿಯರ್ ಕಾಲೇಜ್ ಮೈದಾನದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ಮಾಡಿ ಮಾತನಾಡಿದರು ದೇಶದಲ್ಲಿ ಒಂದು ರೀತಿಯ ಏಕ ರೂಪ ಮನಸ್ಥಿತಿ ಆಡಳಿತವಾದ ಸರ್ಕಾರ ಅಥವಾ ಪಕ್ಷವಾಗಿದೆ ಆ ಮನಸ್ಥಿತಿಯು ಒಂದು ದೇಶ ಒಂದು ಭಾಷೆ ಒಂದು ಧರ್ಮ ಒಂದು ಸಂಸ್ಕೃತಿ ಕಂಡುಬರುತ್ತಿದೆ ಅದು ಅಗತ್ಯವಿಲ್ಲ ಇಲ್ಲಿ ಬೇಕಾಗಿರುವುದು ವಿವಿಧತೆಯಲ್ಲಿ ಏಕತೆ ವರುತ್ತು ಏಕ ಸಂಸ್ಕೃತಿಯಲ್ಲ ನಮ್ಮ ಭಾಷೆ ನಮ್ಮ ಸಂಸ್ಕೃತಿಯನ್ನು ಗೌರವಿಸೋಣ ರಾಷ್ಟ್ರ ಧ್ವಜ ಜೊತೆಗೆ ರಾಜ್ಯ ಧ್ವಜ ಹಾರಿಸೋದು ಹೆಮ್ಮೆಯಿದೆ ಎಂದು ಅಭಿಪ್ರಾಯಪಟ್ಟರು ಈ ಮೊದಲು ಪ್ರಾಸ್ತಾವಿಕವಾಗಿ ಮಾತನಾಡಿದ ತಾಲ್ಲೂಕು ದಂಡಾಧಿಕಾರಿ ಮಹೇಶಕುಮಾರ್ ರವರು ಭಾರತಿಯ ಸಂಸ್ಕೃತಿಯಲ್ಲಿ ಮೌಲ್ಯಗಳು ಹಾಸುಹೋಕ್ಕಾಗಿದೆ ಕನ್ನಡ ಭಾಷೆ ತನ್ನದೇಯಾದ ಛಾಪು ಮೂಡಿಸಿದೆ ಈ ನಾಡಿನ ಸಂಸ್ಕೃತಿ ಪರಂಪರೆ ಉಳಿಸಲು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಸಹೋದರೆ ಸಮಾನತೆ ಸಾಮರಸ್ಯ ಭಾವನೆ ಬೆಳೆಸಿಕೊಂಡು ನಮ್ಮ ಪರಂಪರೆಯನ್ನು ಬೆಳೆಸಲು ಪ್ರಯತ್ನಶೀಲರಾಗೋಣ ಎಂದು ತಿಳಿಸಿದರು . ಈ ಸಂದರ್ಭದಲ್ಲಿ ಸಾಹಿತ್ಯಗಳಾದ ಸತ್ಯನಾರಾಯಣ ಹಾಗೂ ಮೌನಕಣಿಯ ಹಾದಿಯ ಕವಿ ಗೊಳೂರು ನಾರಾಯಣ ಸ್ವಾಮಿ ಅವರಿಗೆ ತಾಲ್ಲೂಕು ವತಿಯಿಂದ ಸನ್ಮಾನಿಸಲಾಯಿತು ನಂತರ ವಿವಿಧ ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು ಈ ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಮಳಲಿ ವಸಂತಕುಮಾರ್ .ಜಿಲ್ಲಾ ಪಂಚಾಯಿತಿ ಸದಸ್ಯರಾದ ಮಂಗಳ ಸೋಮಶೇಖರ್ . ತಾಲ್ಲೂಕು ಪಂಚಾಯಿತಿ ಸದಸ್ಯರಾದ ಶಿವಣ್ಣ . ತಾಲ್ಲೂಕು ಕಾರ್ಯ ನಿರ್ವಾಹಕ ಅಧಿಕಾರಿ ಶ್ರೀಕಂಠರಾಜೇಅರಸ್. ನಗರಸಭೆ ಸದಸ್ಯರು ತಾಲ್ಲೂಕು ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು. ಚಾಮುಂಡಿ ನ್ಯೂಸ್ ವರದಿ ವೆಂಕಟೇಶ ಶ್ರೀನಗರ Read the full article
0 notes
chamundinews · 5 years
Text
ನಂಜನಗೂಡಿನಲ್ಲಿ ಡಿ.ದೇವರಾಜು ಅರಸು ರವರ ೧೦೪ ನೇಯ ಜಯಂತಿ ಆಚರಣೆ
Tumblr media Tumblr media
ನಂಜನಗೂಡು: ಪ್ರವಾಹದ ಇನ್ನೆಲೆಯಿಂದ ನಂಜನಗೂಡು ತಾಲ್ಲೂಕಿನ ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ವತಿಯಿಂದ ಡಿ.ದೇವರಾಜು ಅರಸು ರವರ ೧೦೪ ನೇಯ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ತಾಲ್ಲೂಕಿನ ದಂಡಾಧಿಕಾರಿಯಾದ ಮಹೇಶ್ ಕುಮಾರ ಮಾತನಾಡಿ ಸಮಾಜ್ಯಾದಲ್ಲಿ ೧೯೭೦ ರ ದಶಕದಲ್ಲಿ ಹಿಂದುಳಿದ ವರ್ಗದ ಮೇಲೆ ಶೋಷಣೆಯಾಗುತಿತ್ತು. ಆ ಶೋಷಣೆಯ ತಡೆಗಟ್ಟಲು ಅರಸುರವರು ಪ್ರಮುಖರಾಗಿದ್ದರು. ಅವರ ಭೂ ಸುಧಾರಣೆ ಕಾಯ್ದೆ ಬಹಳ ಪ್ರಮುಖವಾಗಿದೆ ಸಮಾಜದ ಸಾಮಾಜಿಕ ನ್ಯಾಯಕ್ಕಾಗಿ ಶ್ರಮಿಸಿದರು. ಈ ಕಾರ್ಯಕ್ರಮದಲ್ಲಿ ದಲಿತ ಸಂಘಟನೆಯ ಮಲ್ಲಹಳ್ಳಿ ನಾರಾಯಣ್, ಶ್ರೀರಾಮಪುರದ ಯಶವಂತ, ನಗರಸಭೆಯ ಪೌರಾಯುಕ್ತ ಕರಿಬಸವಯ್ಯ ನಗರಸಭೆ ಸದಸ್ಯರು ಅಧಿಕಾರಿಗಳು ಭಾಗವಹಿಸಿದ್ದರು. Read the full article
0 notes